Navaratri !!! : Traditional Coconut-Shooting and Felicitation Programme Held at Avanduru, 19/10/2026
ಶ್ರೀ ಗೋಪಾಲಕೃಷ್ಣ, ಈಶ್ವರ -ಶಾಸ್ತಾವು ದೇವಸ್ಥಾನದ ಜೀರ್ಣೋದರ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಗೋಪಾಲಕೃಷ್ಣ ಯುವ ಸಂಘ (ರಿ) ಅವಂದೂರು ಇವರ ಸಹಯೋಗದೊಂದಿಗೆ ನವರಾತ್ರಿ ಪ್ರಯುಕ್ತ ಸನ್ಮಾನ ಪುರಸ್ಕಾರ ಹಾಗೂ ಸಾಂಪ್ರದಾಯಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
ಬಳಿಕ ಮಾತನಾಡುತ್ತಾ ಕೋವಿ ಸಂಸ್ಕೃತಿಯು ಕೊಡಗಿನ ಪ್ರತಿಯೊಬ್ಬರ ಹೆಮ್ಮೆ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಮ್ಮ ಜನಗಳಿಗೆ ತಮ್ಮ ಜೀವನದಲ್ಲಿ ಕೋವಿ ಎಂಬುದು ಅವಿಭಾಜ್ಯ ಅಂಗ. ಇಂತಹ ಕಾರ್ಯಕ್ರಮಗಳು ಸಮುದಾಯದ ಎಲ್ಲರನ್ನು ಒಟ್ಟಿಗೆ ಸೇರಿಸುವುದರೊಂದಿಗೆ ಒಗ್ಗಟ್ಟು ಮೂಡಿಸುತ್ತದೆ ಹಾಗೂ ತಮ್ಮ ಒತ್ತಡದ ಕೃಷಿ ಚಟುವಟಿಕೆಗಳ ಮಧ್ಯೆಯು ಜನರಿಗೆ ಒಂದು ಮನರಂಜನೆ ನೀಡುವಲು ತುಂಬಾ ಸಹಕಾರಿಯಾಗಿದೆ.
