An unforgettable divine experience at the feet of mother Kaveri, 18/10/2022
I felt the divine presence of Mother Kaveri and experienced the most unforgettable moments of my life participating in Kaveri Teerthodbhava. Words fail me to explain this spiritual feeling.
Every step of our barefoot walk from Bhagmandala to the top of the abode of Goddess Kaveri was a memorable experience. Thousands of devotees chanting Kaveramme in unison reached a crescendo at the time of the Theerthodbava. It was a divine experience which cannot be expressed in words. I am sure every one of the devotees present and even those watching through other mediums would have felt the same.
As humans we all commit mistakes and make errors. I prayed to Mother Kaveri to forgive and pardon all my mistakes whether committed knowingly or unknowingly and bless our people with prosperity, health and happiness.
ಕಾವೇರಿ ತಾಯಿಯ ಸಂಕ್ರಮಣದಲ್ಲಿ ಪಾಲ್ಗೊಂಡಿದ್ದು ನನ್ನ ಜೀವನದಲ್ಲೆ ಅತ್ಯಂತ ಅದ್ಭುತವಾದ ಅನುಭವ. ನಾನು ವರ್ಣಿಸಲು ಆಗದಂತ ದೈವಿಕ ಅನುಭವ ನನಗೆ ಆಗಿದೆ. ಅಲ್ಲಿ ನೆರೆದಿದ್ದ ಎಲ್ಲರಿಗೂ ಈ ಅನುಭವವಾಗಿದೆ ಎಂದು ಭಾವಿಸುತ್ತೇನೆ.
ಮನುಷ್ಯನ ಜೇವನದಲ್ಲಿ ತಿಳಿದೋ, ತಿಳಿಯದೆಯೋ, ಇನ್ನೊಬ್ಬರ ಕಾರಣಗಳಿಂದಲೋ ತಪ್ಪು ನಡೆದಿರಬಹುದು. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ, ಸಾರ್ವಜನಿಕ ಬದುಕಿನಲ್ಲಿ ನಾನು ಮಾಡಿರಬಹುದಾದ ಎಲ್ಲಾ ತಪ್ಪನ್ನು ಕ್ಷಮಿಸಿ ತನ್ನ ಮಡಿಲಲ್ಲಿ ನನ್ನನು ಕಾಪಾಡುವ ಆಶೀರ್ವಾದ ಮಾಡಿದ ಅನುಭವ ನನಗಾಗಿದೆ. ಆಕೆಗೆ ನಾನು ಸಂಪೂರ್ಣ ಶರಣಾದ ಸಂಧರ್ಬ ಇದು.
ಕಾವೇರಿ ತೀರ್ಥೋದ್ಭವದ ದಿನ ಬರಿಗಾಲ ಕಾಲ್ನಡಿಗೆಯಲ್ಲಿ ತಲಕಾವೇರಿ ತಲುಪಿ ಸಾವಿರಾರು ಭಕ್ತರ ನಡುವೆ ತಾಯಿಯ ಆಶೀರ್ವಾದ ಪಡೆದು ಧನ್ಯನಾದೆ. ಕವೇರಮ್ಮೆಯ ಘೋಷಣೆ ಸಾವಿರಾರು ಕಂಠಗಳಿಂದ ಒಕ್ಕೊರಳಲ್ಲಿ ಮೊಳಗಿದ್ದು ತೀರ್ಥೋದ್ಭವದ ಸಂಧರ್ಬದಲ್ಲಿ ಮುಗಿಲು ಮುಟ್ಟಿತು.
ಕೊಡಗಿನ, ನಾಡಿನ ಜನರ ಮೇಲೆ ಆಕೆಯ ಆಶೀರ್ವಾದ ಸದಾ ಇರಲೆಂದು ಪ್ರಾರ್ಥಿಸಿದೆ. ಅನಾದಿ ಕಾಲದಿಂದ ಕೊಡಗಿನ ಜನರ, ಕಾಡುಗಳ, ಜೀವರಾಶಿಗಳನ್ನು ಸಲಹುತ್ತಿರುವ ಕಾವೇರಿ ಮಾತೇ ಎಲ್ಲರಿಗೂ ಒಳಿತನ್ನೇ ಮಾಡಲಿ. ನಾಡಿನ ಸಮಸ್ತ ಜನತೆ ಮೇಲೆ ತಾಯಿಯ ಆಶೀರ್ವಾದ ಇರಲಿ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Harangi #Cauvery #Kaveri #Teerthodbhava #Sankramana