All-party meet on Karnataka's river water disputes, 18/03/2022
ಕರ್ನಾಟಕ ಎದುರಿಸುತ್ತಿರುವ ಹಲವಾರು ಅಂತರರಾಜ್ಯ ನದಿ ವಿವಾದಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುವ ಮುನ್ನ, ಸಿ.ಎಲ್.ಪಿ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಾಜಿ ಜಲಸಂಪನ್ಮೂಲ ಸಚಿವರದಾ ಶ್ರೀ ಎಂ.ಬಿ.ಪಾಟೀಲ್ ಅವರು, ಶ್ರೀ ಎಚ್.ಕೆ.ಪಾಟೀಲ್ ಅವರು, ಕೆ.ಪಿ.ಸಿ.ಸಿಯ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರು, ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿ ಪ್ರಸಾದ್ ಅವರು, ಹಾಗೂ ಪಕ್ಷದ ಮುಖ್ಯ ಸಚೇತಕರಾದ ಅಜಯ್ ಸಿಂಗ್ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆ ಜರುಗಿತು.
ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈ ವಿಷಯದ ಬಗ್ಗೆ ಯಾವ ನಿಲುವನ್ನು ತಳಿಯಬೇಕು ಎಂಬುದರ ಬಗ್ಗೆ ದೀರ್ಘವಾದ ಸಮಾಲೋಚನೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕಚೇರಿಯಲ್ಲಿ ನಡೆಯಿತು. ಕಾವೇರಿ ನದಿ, ಮಹದಾಯಿ, ಕೃಷ್ಣ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವನ್ನು ತಿಳಿಸಲು ಚರ್ಚೆ ಮಾಡಲಾಯಿತು.
ಈ ಚರ್ಚೆಯ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಹಿರಿಯ ಮುಖಂಡರಿಂದ ಕಲಿಯುವ ಅವಕಾಶ ಒದಗಿಬಂತು. ಈ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯನವರಿಗೂ, ಇತರ ಮುಖಂಡರಿಗೂ ನನ್ನ ಧನ್ಯವಾದಗಳು.
#Kaveri #Cauvery #Krishna #Mahadayi #Mekedatu #Kodagu #Ponnampet #Madikeri #Virajpet
#Kaveri #Cauvery #Krishna #Mahadayi #Mekedatu #Kodagu #Ponnampet #Madikeri #Virajpet