**Birsa Munda’s Sacrifice and Ideals Remembered at Janajatiya Gaurav Divas in Titimati**, 17/11/2026
ಬುಡಕಟ್ಟು ಸಮುದಾಯದ ಹೆಮ್ಮೆಯ ನಾಯಕ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಇತಿಹಾಸ ಪುರುಷ ಭಗವಾನ್ ಶ್ರೀ ಬಿರ್ಸಾ ಮುಂಡಾ ಅವರ ಜನ್ಮದಿನಾಚರಣೆಯ ಅಂಗವಾಗಿ, ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಆಯೋಜಿಸಲಾಗಿದ್ದ “ಜನಜಾತೀಯ ಗೌರವ ದಿವಸ್” ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೌರವ ನಮನಗಳನ್ನು ಸಲ್ಲಿಸಲಾಯಿತು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಬ್ರಿಟಿಷರ ದಬ್ಬಾಳಿಕೆ, ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ಬುಡಕಟ್ಟು ಸಮುದಾಯದ ಹಕ್ಕು, ಅಸ್ಮಿತೆ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ ಬಿರ್ಸಾ ಮುಂಡಾ ಅವರು ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.
ಅವರ ಧೈರ್ಯ, ಹೋರಾಟದ ಮನೋಭಾವ ಹಾಗೂ ಸಾಮಾಜಿಕ ನ್ಯಾಯದ ಆದರ್ಶಗಳು ಇಂದಿಗೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿವೆ. ಬುಡಕಟ್ಟು ಸಮುದಾಯದ ಜನರು ಅವರನ್ನು ಮಹಾನ್ ನಾಯಕರೆಂದು ಗೌರವಿಸಿ ಸ್ಮರಿಸುತ್ತಿರುವುದು ಅವರ ಹೋರಾಟದ ಮಹತ್ವ ಹಾಗೂ ಆದರ್ಶಗಳ ಶಾಶ್ವತತೆಗೆ ಸಾಕ್ಷಿಯಾಗಿದೆ. ಇಂತಹ ಮಹಾನ್ ಚೇತನದ ಜೀವನಾದರ್ಶಗಳನ್ನು ಸ್ಮರಿಸುವುದರೊಂದಿಗೆ, ಅವರ ಹೋರಾಟದ ಸಂದೇಶವನ್ನು ಮುಂದಿನ ಪೀಳಿಗೆಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
