Tiger attacks: Don't play with lives and emotions of people, 15/02/2023

Tiger attacks: Don't play with lives and emotions of people. ಜನರ ಭಾವನೆ ಮತ್ತು ಜೀವಗಳ ಜೊತೆ ಆಟ ಆಡಬೇಡಿ
 
ಪ್ರತಿ ಬಾರಿ ಹುಲಿ ದಾಳಿಯಾದಾಗ ವೀರಾವೇಶದಿಂದ ಪ್ರಚೋದನೆಯ ಮಾತುಗಳನ್ನು ಆಡಿ, ಜನರಲ್ಲಿ ಆತಂಕ ಮೂಡಿಸುವುದು ಮಾತ್ರ ಜನ ಪ್ರತಿನಿಧಿಗಳ ಕೆಲಸವಿದ್ದಂತಿದೆ. ಮುಂದಿನ ದಾಳಿಯಾಗುವವರೆಗೂ ಜನರ ದಿಕ್ಕುತಪ್ಪಿಸುವ ಇಂತಹ ಕೆಲಸಕ್ಕೆ ಬಾರದ ಮಾತುಗಳನ್ನು ನಿಲ್ಲಿಸಿ ಕಾಡುಪ್ರಾಣಿಗಳು ಊರಿನೊಳಗೆ ಬರದಂತೆ ವೈಜ್ಞಾನಿಕ ಕ್ರಮಗಳನ್ನು ಜರುಗಿಸಬೇಕಾಗಿದೆ.
 
ಹುಲಿ ದಾಳಿ ನಡೆಯುತ್ತಿರುವುದು ಕಾಡಿನಲ್ಲಿ ಅಲ್ಲ; ಜನ ವಾಸ ಮಾಡುವ ಪ್ರದೇಶಗಳಲ್ಲಿ. ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಅವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಶುರುವಾಯಿತೆ? ಶಾಶ್ವತ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು ದಾಳಿಯಾದಾಗ ಮಾತ್ರ ಕಾಡಿಗೆ ನುಗ್ಗಿ ಗುಂಡು ಹೊಡೆಯುತ್ತನೆ ಎನ್ನುವ ಹೇಳಿಕೆ ಕೊಡುವುದು ಹಾಸ್ಯಾಸ್ಪದ.
 
ಜನರ ಭಾವನೆ ಮತ್ತು ಜೀವಗಳ ಜೊತೆ ಆಟ ಆಡಬೇಡಿ. ಹುಲಿ ದಾಳಿ, ಆನೆ ದಾಳಿಗಳು ರಾಜಕೀಯ ವಸ್ತುಗಳಲ್ಲ. ಕಾನೂನಿನ ಚೌಕಟ್ಟಿನಲ್ಲಿ, ಪ್ರಾಣಿಗಳಿಗೆ ಮತ್ತು ಅರಣ್ಯಕ್ಕೆ ಹಾನಿಯಾಗದಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೇ ಹೊರತು ಜನರಲ್ಲಿ ಆತಂಕ ಮೂಡಿಸುವ ಮಾತುಗಳಲ್ಲ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri