State-Level Journalists’ Meet Held in Madikeri, 04/11/2026

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಕಲರವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ವರ್ಷದ ಬಹುತೇಕ ದಿನಗಳನ್ನು ತಮ್ಮ ವೃತ್ತಿಯನ್ನು ನಿಭಾಯಿಸುತ್ತಾ ಸಮಾಜದ ತಪ್ಪು ಸರಿಗಳನ್ನು ಜನತೆಯ ಮುಂದಿಡುತ್ತಾ, ಹಲವು ವಿಭಾಗಗಳಲ್ಲಿ ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವ ವೃತ್ತಿ ಪತ್ರಕರ್ತರಾಗಿದಾರೆ. ಒತ್ತಡಗಳ ನಡುವೆಯೂ ತಮ್ಮ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸುವ ಪತ್ರಕರ್ತರು ಸುದ್ದಿಯ ಜೊತೆಗೆ ಕ್ರೀಡಾಕೂಟದಲ್ಲಿಯೂ ಸಹ ಪಾಲ್ಗೊಳ್ಳುತ್ತಿರುವುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಪಂದ್ಯಕೂಟಗಳು ಅತ್ಯಗತ್ಯವಾಗಿದೆ.