Annual conference was held by the Department of Law-Human Rights and Information of All India Congress Committee at Science Bhavan, New Delhi. The conference was overwhelmed, a long discussion on the rights of the constitution, protection of the constitut, 03/08/2025
ನವದೆಹಲಿಯ ವಿಜ್ಞಾನ ಭವನದಲ್ಲಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾನೂನು-ಮಾನವ ಹಕ್ಕು ಮತ್ತು ಮಾಹಿತಿ ಇಲಾಖೆಯ ವತಿಯಿಂದ ವಾರ್ಷಿಕ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಅತಿ ಯಶಸ್ಸಾಗಿ, ಸಂವಿಧಾನದ ಹಕ್ಕುಗಳು, ಸಂವಿಧಾನದ ರಕ್ಷಣೆ ಹಾಗೂ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ ವಿಚಾರವಾಗಿ ಸುಧೀರ್ಘವಾದ ಚರ್ಚೆ ನಡೆಸಲಾಯಿತು. ಸಮಾವೇಶದ ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ, ಸಂಸದರಾದ ಶ್ರೀಮತಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರೊಂದಿಗೆ ಭಾಗವಹಿಸಲಾಯಿತು