Honorable Chief Minister Shri Siddaramaiah released the tournament launch by putting Chenanda at Home Office Krishna. One crore rupees for this tournament to be held in May 2026 The Chief Minister has promised to provide grants and come to watch the tourn, 02/11/2025

ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಗೃಹಕಚೇರಿ ಕೃಷ್ಣದಲ್ಲಿ ಚೇನಂಡ ಹಾಕಿ ಪಂದ್ಯಾವಳಿಯ ಲಾಂಛನ ಬಿಡುಗಡೆ ಮಾಡಿದರು. 2026ರ ಮೇ ತಿಂಗಳಲ್ಲಿ ನಡೆಯುವ ಈ ಪಂದ್ಯಾವಳಿಗೆ ಒಂದು ಕೋಟಿ ರೂ. ಅನುದಾನ ಒದಗಿಸುವುದಾಗಿ‌ ಹಾಗೂ ಪಂದ್ಯಾವಳಿ ನೋಡಲು ಬರುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಭೋಸರಾಜು , ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ಮತ್ತು ಹಿಂದುಳಿದ ವರ್ಗ ಸಚಿವರಾದ ಶ್ರೀ ಶಿವರಾಜ್ ತಂಗಡಗಿ, ಚೇನಂಡ ಕುಟುಂಬಸ್ಥರು ಹಾಗೂ ಕೊಡವ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.