Illegal and forcible eviction of poor people should stop immediately, 02/08/2022
ವಿರಾಜಪೇಟೆ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಮೆಕಾಡು ಪೈಸಾರಿ ತೆರವು ಕಾರ್ಯಾಚರಣೆಯನ್ನು ತಾಲೂಕು ಆಡಳಿತ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದೇನೆ. ಸರ್ಕಾರ ಜನವಿರೋಧಿ ಧೋರಣೆಯನ್ನು ಕೈಬಿಟ್ಟು ಜನರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಬಾರದು.
ಸ್ಥಳೀಯ ನಿವಾಸಿಗಳ ಕೋರಿಕೆಯ ಮೇರೆಗೆ ತೆರಮೆಕಾಡು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದ್ದೇನೆ. ಒಂದು ವೇಳೆ ತಾಲೂಕು ಆಡಳಿತ ಒತ್ತಡಕ್ಕೆ ಮಣಿದು ಮತ್ತೆ ಕಾರ್ಯಾಚರಣೆ ಮುಂದುವರಿಸಿದರೆ ಕಾನೂನು ಹೋರಾಟ ಅನಿವಾರ್ಯವಾದಿತು ಎಂದು ಎಚ್ಚರಿಸಿದ್ದೇನೆ.
ಸ್ಥಳಕ್ಕೆ ಸಂಬಂಧಿಸಿದ ಬಹಳಷ್ಟು ದಾಖಲೆಗಳನ್ನು ಪರಿಶೀಲಿಸಿದಾಗ ಈ ಕಾರ್ಯಾಚರಣೆ ಕಾನೂನಾತ್ಮಕವಾಗಿಲ್ಲ ಎಂಬುದು ತಿಳಿದು ಬರುತ್ತದೆ. ತೆರವು ಮಾಡುವ ಕುರಿತು ಯಾವುದೇ ಸ್ಪಷ್ಟ ಆದೇಶವಿಲ್ಲ. ಯಾವುದೇ ಕಾನೂನು ಕ್ರಮಗಳನ್ನು ಪಾಲಿಸದೆ ಏಕಾಏಕಿ ತೆರವುಗೊಳಿಸುವ ಕಾರ್ಯಾಚರಣೆಯ ಹಿಂದಿರುವ ಉದ್ದೇಶ ನಿಗೂಢವಾಗಿದೆ. ಇದೀಗ ಈ ಪ್ರದೇಶದಲ್ಲಿ ನೂರಾರು ಸಂಖ್ಯೆಯ ಬಡಜನರು ಮನೆ ನಿರ್ಮಿಸಿ ವಾಸಿಸುತ್ತಿದ್ದು, ಇವರಿಗೆ ಕಾನೂನು ಹೋರಾಟದ ಮೂಲಕ ರಕ್ಷಣೆ ನೀಡಲು ಬದ್ಧನಾಗಿದ್ದೇನೆ.
ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ನಗರ ಅಧ್ಯಕ್ಷರಾದ ಎಂ.ಪಿ. ತಿಮ್ಮಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ, ಜಿ. ಪಂ. ಮಾಜಿ ಸದಸ್ಯ ಬಿ.ಎನ್ ಪ್ರಥ್ಯು, ವಕೀಲರಾದ ಬೊಪಣ್ಣ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶಿವಣ್ಣ, ನಾಗೇಶ್, ಗಾಯತ್ರಿ, ಸ್ಥಳೀಯ ಮುಖಂಡರಾದ ಗಿರಿ, ಅನಿಲ್ ಮೊದಲಾದವರು ಜೊತೆಗಿದ್ದರು.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet