High Court strictures Govt and Anti-Corruption Bureau on handling of corruption cases , 01/07/2022

ಮೊನ್ನೆ ದಿನ ಕರ್ಣಾಟಕ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣ ಒಂದನ್ನು ವಿಚಾರಣೆ ನಡೆಸುವ ಸಮಯದಲ್ಲಿ ಕೋರ್ಟ್ ಎ.ಸಿ.ಬಿ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಸಮಯದಲ್ಲಿ ನಾನು ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ನಲ್ಲಿ ಹಾಜರಿದ್ದೆ. ಮಾಧ್ಯಮದವರು ಈ ಬಗ್ಗೆ ವಿಚಾರಿಸಿದಾಗ, ಅಲ್ಲಿ ನಡೆದ ಘಟನೆಯನ್ನು ಅವರಿಗೆ ವಿವರಿಸಿದೆ. ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಸರ್ಕಾರಿ ಮತ್ತು ಎ.ಸಿ.ಬಿ ವಕೀಲರಿಗೆ ಕೇಳಿದ ಪ್ರಶ್ನೆಗಳು ಕರ್ನಾಟಕದ ಸಾಮಾನ್ಯ ಜನರ ಅಭಿಪ್ರಾಯ ಹಾಗೂ ಪ್ರಶ್ನೆಗಳು ಕೂಡ. ಎ.ಸಿ.ಬಿ ಯ ರಚನೆ ಮತ್ತು ಅದು ಮಾಡಬೇಕಾಗಿರುವ ಕೆಲಸ ಈಗ ಅದು ಮಾಡುತ್ತಿರುವ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಕೋರ್ಟ್ ಹೇಳಿದಂತೆ ಈ ಸಂಸ್ಥೆ ಒಂದು 'ಕಲೆಕ್ಷನ್ ಸೆಂಟರ್' ಆಗಿದೆ. ಸಣ್ಣ ಪುಟ್ಟ ಅಧಿಕಾರಿಗಳನ್ನು ಬಲಿ ಹಾಕಿ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಮಣೆ ಹಾಕುವ ಕೆಲಸ ನಡೆಯುತ್ತಿದೆ. ಎಷ್ಟು ಜನ ಮೇಲಾಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ ಮತ್ತು ಅದರಲ್ಲಿ ಎಷ್ಟು ಪ್ರಕರಣಗಳಲ್ಲಿ 'ಬಿ ರಿಪೋರ್ಟ್' ಮಾಡಲಾಗಿದೆ ಎನ್ನುವ ವಿವರವನ್ನು ಕೋರ್ಟ್ ಕೇಳಿದೆ. ಸರ್ಕಾರ ಹಾಗೂ ಎ.ಸಿ.ಬಿ ಈಗಲಾದರೂ ಎಚ್ಚೆತ್ತುಕೊಂಡು ಸಂಸ್ಥೆಯ ಮೂಲ ಉದ್ದೇಶವಾದ ಭ್ರಷ್ಟಾಚಾರ ನಿರ್ಮೂಲನೆ ಮಾಡುವತ್ತ ಕೆಲಸ ಮಾಡಬೇಕಿದೆ. #Corruption #ACB #AntiCorruptionBureau #Karnataka #Kodagu #Coorg #Madikeri #Virajpet #Kushalnagar #Gonikoppal